November 15, 2011

ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು...

ನೀವ್ ಎಳಿ ಅಬ್ಬನ ಎಂಗೆ ಹಾಚರಿಸಿದ್ರಿ ....

ಅಯ್ಯಯೋ!!! x-(  U2 ವಾಹಿನಿ ನಿರೂಪಕಿಯ ಈ ಸಂಭಾಷಣೆ ಕೇಳೋಕೆ ಆಗದೆ... ಮ್ಯೂಟ್ ಮಾಡಿ... ಮುಂದೆ ಯಾವ ಹಾಡು ಬರಬಹುದು ಅಂತ ಕಾಯ್ತಾ ಇದ್ದ ಹಾಗೇನೆ... ಬಂತು ನೋಡಿ ನಮ್ಮ ಪರಮಾತ್ಮ ಚಿತ್ರದ ಗೀತೆ... ;)

Examಉ Hallನಲ್ಲಿ ನನ್ನ ಪರಮಾತ್ಮ ..
Morning-ಉ Show-ಗೆ ಹೋಗು ಕಂದಾ ಅಂತಾನೆ ..
Class-ಅಲ್ಲಿ ನಾನು ಒಬ್ನೇ ಒಳ್ಳೆ ಪುಣ್ಯಾತ್ಮ ..
Answer-ಉ Sheet-ನಲ್ಲಿ ಬರೆದೆ Question-ಎ..

ಇದರ ಕೊನೆ ಸಾಲನ್ನ ಗಮನಿಸಿ..."ಬರೆದೆ" ಪದವನ್ನ ಬಿಟ್ಟ್ರೆ ಮಿಕ್ಕಿದೆಲ್ಲ ಅಪ್ಪಟ ಕಂಗ್ಲಿಷ್!!! :D ಆಂಗ್ಲ ಪದಗಳಿಗೆ ಕನ್ನಡದ ವಿಭಕ್ತಿ ಪ್ರತ್ಯಯ ಸೇರಿಸಿ ಹಾಡುಗಳನ್ನು ರಚಿಸುವ ಪ್ರಯತ್ನ ಯಾಕೆ??? ಇದನ್ನ ನಮ್ಮ ಯೋಗರಾಜ್ ಭಟ್ ರಚಿಸಿರೋದು ಅಂತ ಗೊತ್ತದ್ಮೆಲಂತೂ, ಸ್ವಲ್ಪ ಆಶ್ಚರ್ಯ, ಸ್ವಲ್ಪ ಹತಾಶೆ ಆಗಿದಂತು ನಿಜ!!!

ಸಿನಿಮಾ ಸಾಹಿತ್ಯ ಬಿಡಿ, ನಮ್ಮ ನಿತ್ಯ ಜೀವನದಲ್ಲಿ ಆಂಗ್ಲ ಪದಗಳಿಗೆ ಎಷ್ಟು ಮೊರೆ ಹೋಗ್ತಾ ಇದಿವಿ ಅಂದ್ರೆ...ಆಂಗ್ಲ ಪದಗಳನ್ನ ಬಳಸದೆ ಒಂದು ವಾಕ್ಯ ರಚಿಸೋದು ಕಷ್ಟ...ಇದು ಹೀಗೆ ಮುಂದುವರಿದ್ರೆ...ನಮ್ಮ ಮಾತೃಭಾಷೆ ಕಂಗ್ಲಿಷ್ ಅಂತ  ಹೇಳ್ಕೊಳೋ ಸ್ಥಿತಿ ಬಂದ್ರು ಬರಬಹುದು!!!

ಹೀಗೆ, ಒಂದು ಕಡೆ ಕಂಗ್ಲಿಷ್ ಗೆ ಮೊರೆ ಹೋಗುತಿರೋ ಕನ್ನಡಿಗರಿದ್ದರೆ, ಮತ್ತೊಂದೆಡೆ ಆಂಗ್ಲ ನಾಮಫಲಕಗಳಿಗೆ ಮಸಿ ಬಳಿಯೋದರಿಂದ ಏನೂ ಪ್ರಯೋಜನ ಇಲ್ಲ! :(

ಕನ್ನಡಕ್ಕೆ ಕನ್ನಡೇತರರಿಂದ ದ್ರೋಹ ಆಗುತ್ತಿದೆ ಅಂತ ದೂಷಿಸೋಕಿಂತ ಮುಂಚೆ ನಮ್ಮನ್ನ ನಾವು ಸರಿಪಡಿಸಿಕ್ಕೊಳೋಣ. ದಿನಕ್ಕೆ ಅರ್ಧ ಗಂಟೆ ಅಚ್ಚ ಹಾಗೂ ಶುದ್ಧ ಕನ್ನಡದಲ್ಲಿ ಮಾತಾಡೋಕೆ ಪ್ರಯತ್ನಿಸಿದರೆ ಹೇಗೆ ? ಇದರಿಂದ ನಮ್ಮ ಶಬ್ದ ಬಂಡಾರನು ವೃದ್ದಿ ಆಗುತ್ತೆ ಹಾಗೆ ಕನ್ನಡಾನ ಉಳಿಸೋಕೆ ನಮ್ಮ ಕಡೆ ಇಂದ ಒಂದು ಸಣ್ಣ ಪ್ರಯತ್ನವು ಸಹ ಆಗುತ್ತೆ...ಅಂತರ್ಜಾಲದಲ್ಲಿ ಸಿಗುವ ಕೆಲವು kan-eng ಮತ್ತು eng-kan ನಿಘಂಟುಗಳ ಇಲ್ಲಿವೆ ನೋಡಿ:  
 
ಇನ್ನು ಬಾಷಾಭಿಮಾನದ ವಿಷಯಕ್ಕೆ ಬಂದ್ರೆ, ನಮ್ಮ ಕನ್ನಡಿಗರಿಗೆ ಬಾಷಾಭಿಮಾನ ಇಲ್ಲ ಅಂತಲ್ಲ, ಆದ್ರೆ ಯಾಕೊ ನಿರ್ಲಿಪ್ತ ಮನೋಭಾವ!!! ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡದಲ್ಲಿ ನಾವ್ಯಾಕೆ ಮಾತಾಡೋಲ್ಲ??? x-(  ನಮ್ಮ ಕನ್ನಡಿಗರೇ ಕನ್ನಡಾನ  ಬಳಸದಿದ್ರೆ ಹೊರ ರಾಜ್ಯದವರಿಗೆ ಕನ್ನಡ ಕಲಿರಿ ಅಂತ ಹೇಳೋದ್ರಲ್ಲಿ ಅರ್ಥ ಇಲ್ಲ!! ಹೆಚ್ಚು-ಹೆಚ್ಚು ಕನ್ನಡ ಕಿವಿಗೆ ಬಿದ್ದಷ್ಟು ...ಬೇರೆ ಭಾಷಿಗರಿಗೆ ಕನ್ನಡ ಕಲಿಯುವ ಅನಿವಾರ್ಯತೆ ಸೃಷ್ಟಿ ಆಗುತ್ತೆ!

A revolution should begin from within ಅಂತ ಹೇಳ್ತಾರಲ್ಲ, ಹಾಗೆ ನಾನು ಕನ್ನಡಾನ ಹರಡೋಕೆ ಮಾಡುವ ಸಣ್ಣ-ಸಣ್ಣ ಪ್ರಯತ್ನಗಳು:
  • ATM ಹಾಗೂ IVRSಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುತ್ತೀನಿ!  
  • ಯಾವುದಾದರು website (ಮಿನ್ನೆಲೆ!!), ಕನ್ನಡ ಅವತರಿಣಿಕೆ ಇದ್ದರೆ ಅದನ್ನೇ ಬಳಸೋದು...ಉದಾಹರಣೆಗೆ ಗೂಗಲ್-ಕನ್ನಡ
  • ನನ್ನ ಕನ್ನಡೇತರ ಸ್ನೇಹಿತರೊಂದಿಗೆ ಮಾತನಾಡುವಾಗ, ಆಗಾಗ ಕೆಲವು ಕನ್ನಡ ಪದಗಳನ್ನು ಬಳಸುತ್ತೀನಿ :p  ಉದಾಹರಣೆಗೆ, ಅಲ್ವಾ, ಹೌದು, ಇಲ್ಲ, ಮತ್ತೆ, ಸಖತ್, ಏನ್ ಸಮಾಚಾರ... ಹೀಗಾದ್ರು ಅವರಿಗೆ ಕನ್ನಡದ ಕೆಲವು ಪದಗಳು ಪರಿಚಯವಾಗಲಿ! 
  • ಕನ್ನಡದ ಹಾಡುಗಳು ನನ್ನ ಮೊಬೈಲ್ ರಿಂಗ್ ಟೋನ್ !! ಕನ್ನಡೇತರರಿಗೆ ಕನ್ನಡ ಹಾಡುಗಳು ಪರಿಚಿತವಾಗಲಿ... ನನ್ನ ಪ್ರಸ್ತುತ ರಿಂಗ್ ಟೋನ್, ಪರಮಾತ್ಮ ಚಿತ್ರದ, "ಪರವಶನಾದೆನು...ಅರಿಯುವ ಮುನ್ನವೇ..." ;)
  • ಅವಕಾಶ ಸಿಕ್ಕಾಗೆಲ್ಲ ಕನ್ನಡ ಸಂಸ್ಕೃತಿ, ಸಾಹಿತ್ಯ, ಸಾಹಿತ್ಯಗಾರರ ಬಗ್ಗೆ ಪರಿಚಯಿಸೋದು! ಉದಾಹರಣೆಗೆ, ಕನ್ನಡೇತರರೊಂದಿಗೆ ಡಿ.ವಿ.ಜಿ ರಸ್ತೆ, ತಿ.ನಂ.ಶ್ರೀ ರಸ್ತೆ, ಅಥವಾ ನೃಪತುಂಗ ರಸ್ತೇಲಿ ಹೋಗ್ತಿದ್ರೆ ಅವರ ಸಣ್ಣ ಪರಿಚಯ ಮಾಡದೆ ಬಿಡೋಲ!! :p

ಒಟ್ಟಿನಲ್ಲಿ ಕನ್ನಡಾಭಿಮಾನನ ಬರಿ ವರ್ಷದ ಹನ್ನೊ0ದನೆ ತಿಂಗಳಿಗೆ ಮೀಸಲಿಡದೆ...ವರ್ಷ ಪೂರ್ತಿ ಕನ್ನಡಾಭಿಮನವನ್ನ ವ್ಯಕ್ತ ಪಡಿಸುತ್ತಾ....ಕನ್ನಡವನ್ನು ಬೆಳಸಿ ಹಾಗೂ ಉಳಿಸಿ !!!
ನಮ್ಮದೇ ನಾಡಿನಲ್ಲೇ, ನಮ್ಮ ಜನರಿಗೆ....ನಮ್ಮ ಭಾಷೆನ ಉಳಿಸಿ, ಬೆಳೆಸಿ ಅಂತ ಮನವಿ ಮಾಡಿಕೊಳ್ಳೋ ಪರಿಸ್ಥಿತಿ!!! ಎಂಥ ವಿಪರ್ಯಾಸ ಅಲ್ವ???

PS: My SPECIAL thanks to two of my best friends - Manu and Shabna, who are non-kannadigas, and have not only learned Kannada, but also make an attempt to speak in Kannada in their day-to-day life... hats-off!!! :)