ಈ ಫಿಲಂನ ಎಷ್ಟು ಸಲ ನೋಡಿದ್ದಿನಿ ಅಂತ ಒಂದು ಹಂತದ ತನಕ ಲೆಕ್ಕ ಇಟ್ಟಿದೆ, ಆದ್ರೆ ಎಷ್ಟು ಸರ್ತಿ ನೋಡಿದೀನಿ ಅಂದ್ರೆ ಈಗ ಲೆಕ್ಕ ತಪ್ಪಿ ಹೋಗಿದೆ! ಬಹುಶ 30+ ಅನ್ಸುತ್ತೆ! ಇವತ್ತು ಈ ಫಿಲಮ್ನ ಮತ್ತೊಂಮ್ಮೆ ನೋಡಿದ ಮೇಲೆ, ಇದರ ಬಗ್ಗೆ ಬರಿಯದೆ ಸುಮ್ಮನೆ ಇರೋಕೆ ಆಗಲಿಲ್ಲ, ಕಾರಣ ಅನೇಕ, ಬಹುಶ ನನ್ನ ಮೇಲೆ ಪರಿಣಾಮ ಬೀರಿದ ಮೊದಲ ಕನ್ನಡ ಚಲನಚಿತ್ರ :)
ನನಗೆ ಯಾವಾಗಲು ಈ ಸೂರ್ಯ ಗ್ರಹಣ ಮತ್ತೆ ಚಂದ್ರ ಗ್ರಹಣದ ನಡುವೆ ಗೊಂದಲ ಇರುತಿತ್ತು ... ಅದು ಬಗೆಹರೆದಿದು ಈ ಫಿಲಂನ ನೋಡಿದ ಮೇಲೆಯೇ, ಹೇಗೆ ಅಂತೀರಾ?? ಈ ಅಮೇರಿಕಾ ಅಮೇರಿಕ ಫಿಲಂ title-chord ಶುರುವಾಗೋದು ಹೀಗೆ "ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ....." so I started relating the definition of the eclipse to the three core characters of the film ;) (ಸೂರ್ಯ, ಭೂಮಿ ಮತ್ತು ಶಶಾಂಕ್ )
ಇನ್ನು ಇದರ one-liners, ಮನುಷ್ಯನಿಗೆ ಬೇರು ಮುಖ್ಯನ ಅಥವಾ ರೆಕ್ಕೆ ಮುಖ್ಯನ ಅನ್ನುವ ಸ೦ವಾದ, concept of brain-drain, ದೇಶಾಭಿಮಾನ ಎಲ್ಲವು ನಮ್ಮ ಯೋಚನಾ ಲಹರಿಯನ್ನು ಪ್ರಚೋದಿಸುತ್ತದೆ!
ಹಾಗೆ ಇದರ ಹಾಡುಗಳು, ಅಬ್ಬ! ಇದರ craze ಹೇಗಿತ್ತು ಅಂದ್ರೆ ಮಧ್ಯ ರಾತ್ರಿಲಿ ಎದ್ದಾಗಲು ಈ ಹಾಡುಗಳೇ ಗುನುಗುತ್ತಿತು...ಬರಿ ಸಂಗಿತವಷ್ಟೇ ಅಲ್ಲ ಅದರ ಸಾಹಿತ್ಯ ಮನಸಿನಲ್ಲಿ ಸದಾ ಉಳಿಯುತ್ತೆ.
ನನ್ನ fav dialogues/ಸಾಲುಗಳು:
- ಬಾನಲ್ಲೇ ಓಡಿದರು ಮೇಘ...ಮಳೆಗೂ ಮಣ್ಣಲ್ಲೇ ಜಾಗ ಅಲ್ಲಿಗೂ ಇಲ್ಲಿಗೂ ಸೇತು...ಮೌನ ಮೌನದ ನಡುವೆ ಮಾತು....
- ನೆನಪೆಂದರೆ ಮಳೆಬಿಲ್ಲ ಛಾಯೆ....
- ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ...
- ಮನುಷ್ಯನ ಮನಸು ಮನಸಿನ ನಡುವೆ ಹೀಗೆ ಸೇತುವೆ ಇದ್ದಿದರೆ ಎಷ್ಟು ಚೆನ್ನಾಗಿರೋದು...
- Excuse me... ನೀವು ನನ್ನ ಸೀಟ್ ನಲ್ಲಿ ಕುತಿದ್ದಿರ ;)
ಒಟ್ಟಿನಲ್ಲಿ ಸದಾಕಾಲ ನೋಡ ಬಯಸುವ, ಮನಸ್ಸಿಗೆ ನಾಟುವ, ಸಂದೇಶದ ಜೊತೆಗೆ ಮನೋರಂಜನೆಯೂ ಸಹ ನೀಡುವ ಚಿತ್ರ ಅಮೇರಿಕಾ ಅಮೇರಿಕ!! Hats off to ನಾಗತಿಹಳ್ಳಿ ಚಂದ್ರಶೇಕರ್, ಮನೋಮೂರ್ತಿ, ರಮೇಶ್ ಮತ್ತು ಹೇಮಾ :)
Links:
http://www.youtube.com/watch?v=vbal_-xv1k8
http://www.youtube.com/watch?v=aG32Qhs_9_k