August 1, 2010

ಅಮೇರಿಕಾ ಅಮೇರಿಕ!!

ಈ  ಫಿಲಂನ ಎಷ್ಟು ಸಲ ನೋಡಿದ್ದಿನಿ ಅಂತ ಒಂದು ಹಂತದ ತನಕ ಲೆಕ್ಕ ಇಟ್ಟಿದೆ, ಆದ್ರೆ ಎಷ್ಟು ಸರ್ತಿ ನೋಡಿದೀನಿ ಅಂದ್ರೆ ಈಗ ಲೆಕ್ಕ  ತಪ್ಪಿ ಹೋಗಿದೆ! ಬಹುಶ  30+ ಅನ್ಸುತ್ತೆ! ಇವತ್ತು ಈ ಫಿಲಮ್ನ ಮತ್ತೊಂಮ್ಮೆ ನೋಡಿದ ಮೇಲೆ, ಇದರ ಬಗ್ಗೆ ಬರಿಯದೆ ಸುಮ್ಮನೆ ಇರೋಕೆ ಆಗಲಿಲ್ಲ, ಕಾರಣ ಅನೇಕ, ಬಹುಶ ನನ್ನ ಮೇಲೆ ಪರಿಣಾಮ ಬೀರಿದ ಮೊದಲ ಕನ್ನಡ ಚಲನಚಿತ್ರ  :)

ನನಗೆ ಯಾವಾಗಲು ಈ ಸೂರ್ಯ ಗ್ರಹಣ ಮತ್ತೆ ಚಂದ್ರ ಗ್ರಹಣದ ನಡುವೆ ಗೊಂದಲ ಇರುತಿತ್ತು ... ಅದು ಬಗೆಹರೆದಿದು ಈ ಫಿಲಂನ ನೋಡಿದ ಮೇಲೆಯೇ, ಹೇಗೆ ಅಂತೀರಾ??  ಈ  ಅಮೇರಿಕಾ ಅಮೇರಿಕ ಫಿಲಂ title-chord ಶುರುವಾಗೋದು ಹೀಗೆ "ಭೂಮಿ ಮತ್ತು  ಸೂರ್ಯನ ನಡುವೆ ಚಂದ್ರ ಬಂದಾಗ....." so I started relating the definition of the eclipse to the three core characters of the film ;) (ಸೂರ್ಯ, ಭೂಮಿ ಮತ್ತು ಶಶಾಂಕ್ )

ಇನ್ನು ಇದರ one-liners, ಮನುಷ್ಯನಿಗೆ ಬೇರು ಮುಖ್ಯನ ಅಥವಾ ರೆಕ್ಕೆ ಮುಖ್ಯನ ಅನ್ನುವ ಸ೦ವಾದ, concept of brain-drain, ದೇಶಾಭಿಮಾನ ಎಲ್ಲವು ನಮ್ಮ ಯೋಚನಾ ಲಹರಿಯನ್ನು ಪ್ರಚೋದಿಸುತ್ತದೆ!

ಹಾಗೆ ಇದರ ಹಾಡುಗಳು, ಅಬ್ಬ! ಇದರ craze ಹೇಗಿತ್ತು ಅಂದ್ರೆ ಮಧ್ಯ ರಾತ್ರಿಲಿ ಎದ್ದಾಗಲು ಈ ಹಾಡುಗಳೇ ಗುನುಗುತ್ತಿತು...ಬರಿ ಸಂಗಿತವಷ್ಟೇ ಅಲ್ಲ ಅದರ ಸಾಹಿತ್ಯ ಮನಸಿನಲ್ಲಿ ಸದಾ ಉಳಿಯುತ್ತೆ.
ನನ್ನ fav dialogues/ಸಾಲುಗಳು:
  • ಬಾನಲ್ಲೇ ಓಡಿದರು ಮೇಘ...ಮಳೆಗೂ ಮಣ್ಣಲ್ಲೇ ಜಾಗ ಅಲ್ಲಿಗೂ ಇಲ್ಲಿಗೂ ಸೇತು...ಮೌನ ಮೌನದ ನಡುವೆ ಮಾತು....
  • ನೆನಪೆಂದರೆ ಮಳೆಬಿಲ್ಲ ಛಾಯೆ....
  • ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ...
  • ಮನುಷ್ಯನ ಮನಸು ಮನಸಿನ ನಡುವೆ ಹೀಗೆ ಸೇತುವೆ ಇದ್ದಿದರೆ ಎಷ್ಟು ಚೆನ್ನಾಗಿರೋದು...
  • Excuse me... ನೀವು ನನ್ನ ಸೀಟ್ ನಲ್ಲಿ ಕುತಿದ್ದಿರ ;)

ಒಟ್ಟಿನಲ್ಲಿ ಸದಾಕಾಲ ನೋಡ ಬಯಸುವ, ಮನಸ್ಸಿಗೆ ನಾಟುವ, ಸಂದೇಶದ ಜೊತೆಗೆ ಮನೋರಂಜನೆಯೂ ಸಹ ನೀಡುವ  ಚಿತ್ರ  ಅಮೇರಿಕಾ ಅಮೇರಿಕ!! Hats off to ನಾಗತಿಹಳ್ಳಿ ಚಂದ್ರಶೇಕರ್, ಮನೋಮೂರ್ತಿ, ರಮೇಶ್ ಮತ್ತು ಹೇಮಾ  :)
Links:
http://www.youtube.com/watch?v=vbal_-xv1k8
http://www.youtube.com/watch?v=aG32Qhs_9_k

1 comment:

  1. hmmm.. aa kaaladinda nu nan thale thintidhe ee flm bagge... avaga nang asht gothagtirlilla... evaga ee BHAAVAJEEVIya bhaavanegalu artha aagtidhe... hey nenepidya naanu neenu cycle nalli madiwala lake road nalli ride hogi ee haadu haadta edvi.. avaaglu ninge ee baanalli ooDo megha haadu tumba eshta ethu.. ne yaavaglu edanne haadtidhe.. nanage nenepidhe...

    ReplyDelete